ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ; ಬೆಳ್ಳಂ ಬೆಳಿಗ್ಗೆ ಶಾಕ್!
ಬೆಂಗಳೂರು: ಲೋಕಾಯುಕ್ತ (Lokayukta)ಅಧಿಕಾರಿಗಳ ತಂಡವು ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಹಾವೇರಿ (Haveri), ಶಿವಮೊಗ್ಗ (Shivamogga) ಹಾಗೂ ತುಮಕೂರಿನ (Tumakuru) ಹಲವು ಪ್ರದೇಶಗಳಲ್ಲಿ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಸ್ಕಾಂನ ಟೆಕ್ನಿಕಲ್ ನಿರ್ದೇಶಕ ರಮೇಶ್ ಅವರ ಬಸವೇಶ್ವರ ನಗರದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇಂಡಸ್ಟ್ರೀಸ್ ಆಂಡ್ ಬಾಯ್ಲರ್ ಇಲಾಖೆಯ ಉಪನಿರ್ದೇಶಕ […]