81ನೇ ವಯಸ್ಸಿನಲ್ಲಿ ಎಂ.ಎ ಪರೀಕ್ಷೆ ಬರೆದ ವೃದ್ಧ!
ವಿಜಯಪುರ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 81 ವರ್ಷದ ವೃದ್ಧರೊಬ್ಬರು ಎಂಎ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ವಿಜಯಪುರ ನಗರದಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (IGNOU) ನಡೆಸಿದ ಎಂ.ಎ., ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಒಡೆಯರ್ ಎಂಬುವವರು ಪರೀಕ್ಷೆ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್.ಸಿ. ಹಳ್ಳಿ ನಿವಾಸಿ ನಿಂಗಯ್ಯ ಒಡೆಯರ್ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಕನ್ನಡ, […]