ಮಹಾರಾಜ ಟೂರ್ನಿಯ ಆಕ್ಷನ್; 16 ಹಾಗೂ ಗರಿಷ್ಠ 18 ಆಟಗಾರರ ಆಯ್ಕೆ
ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಲಿರುವ ಮಹಾರಾಜ ಟ್ರೋಫಿ ಟಿ20 ಫ್ರ್ಯಾಂಚೈಸಿ ಲೀಗ್ ಟೂರ್ನಿಯಲ್ಲಿ ಆಡಲು ಆಟಗಾರರ ಹರಾಜು ಪ್ರಕ್ರಿಯೆ ಇಂದು ನಡೆಯಲಿದೆ. ಸುಮಾರು 700 ಆಟಗಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಆಟಗಾರರಾದ ಮಯಂಕ್ ಅಗರವಾಲ್, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆ.ಸಿ. ಕಾರ್ಯಪ್ಪ, ಅಭಿಮನ್ಯು ಮಿಷುತನ್, ಪ್ರವೀಣ್ ದುಬೆ, ರೋನಿತ್, ಶ್ರೇಯಸ್, ಜೆ.ಸುಚಿತ್, ಕೆ.ಪಿ. ಅಪ್ಪಣ್ಣ, ವೈಶಾಕ ವಿಜಯಕುಮಾರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಮಹಾರಾಜ ಟೂರ್ನಿಯು ಆಗಷ್ಟ್ 13ರಿಂದ ಆರಂಭವಾಗಲಿದೆ. […]