ಪೊರಕೆಯಿಂದ ಹೊಡೆದು ಜಾತಿ ನಿಂದನೆ!
ಕೋಲಾರ : ವ್ಯಕ್ತಿಯೊಬ್ಬ ಪೊರಕೆಯಿಂದ ಹೊಡೆದು ಜಾತಿನಿಂದನೆ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಹುರುಳಗೆರೆ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್ (30) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸ್ನೇಹಿತರೊಬ್ಬರ ಪತ್ನಿಯ ಕುರಿತು ಶ್ರೀನಿವಾಸ್ ತಪ್ಪಾಗಿ ಮಾತಾಡಿದ್ದಾರೆ ಎಂಬ ಕಾರಣಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಎಣ್ಣೆ ಪಾರ್ಟಿ ಮಾಡುವಾಗ ಸ್ನೇಹಿತರ ಬಳಿ ಮಂಜುಳಾ ಬಗ್ಗೆ ಶ್ರೀನಿವಾಸ್ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅಶೋಕ್, ರಮೇಶ್, ಧರ್ಮಂದ್ರ, ಮಂಜು […]