ಮೆಟಾ ಬ್ಲೂ ಟಿಕ್ ಈಗ ಎಲ್ಲರೂ ತಿಂಗಳಿಗೆ 699 ರೂ. ಪಾವತಿಸಿ ಪಡೆಯಬಹುದು; ಸಾಮಾನ್ಯ ಜನರಿಗೂ ಈ ಸೇವೆ ಲಭ್ಯ!
ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ ಹೇಳಿದ್ದು, ತಿಂಗಳಿಗೆ 699 ರೂ ದರದಲ್ಲಿ ಪಡೆಯಬಹುದು. ತಿಂಗಳಿಗೆ 599 ರೂ ದರದಲ್ಲಿ ವೆಬ್ ಆವೃತ್ತಿಯ ಆಯ್ಕೆಯನ್ನು ಸಹ ಪರಿಚಯಿಸುತ್ತೇವೆ ಎಂದು ಕಂಪನಿ ಹೇಳಿದೆ. ವೆರಿಫೈಡ್ ಆದ ಖಾತೆಯ ಸೇವೆಯನ್ನು ಪಡೆಯಲು, Facebook ಮತ್ತು Instagram ಬಳಕೆದಾರರು ತಮ್ಮ ಖಾತೆಯನ್ನು ಸರ್ಕಾರಿ ID ಕಾರ್ಡ್‌ನೊಂದಿಗೆ ಪರಿಶೀಲಿಸಬೇಕಾಗುತ್ತದೆ. ಫೆಬ್ರವರಿ ತಿಂಗಳಲ್ಲಿ […]