12ನೇ ವರ್ಷದಿಂದ ಹೈನುಗಾರಿಕೆ ಆರಂಭಿಸಿದ ಯುವತಿ, ಈಗ ಕೈ ತುಂಬ ದುಡ್ಡು!
ಇತ್ತೀಚೆಗೆ ಹಲವರು ಕೃಷಿಯೊಂದಿಗೆ ಪಶುಪಾಲನೆಗೂ ಒತ್ತು ನೀಡುತ್ತಿದ್ದಾರೆ. ಈ ಮೂಲಕ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗೆ ಯುವತಿಯೊಬ್ಬರು ಹೈನುಗಾರಿಕೆಯಿಂದ ಶ್ರೀಮಂತರಾಗಿದ್ದಾರೆ. ಮಾರ್ಷಲ್ ಆರ್ಟ್ಸ್ ನಲ್ಲಿ ಬ್ಲಾಕ್ ಬೆಲ್ಟ್ ಹೊಂದಿರುವ ರಾಜಸ್ಥಾನದ ಕೋಟದ ಹುಡುಗಿ ಕೂಡ ಲಕ್ಷ ಲಕ್ಷ ಸಂಪಾದಿಸಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರು 12ನೇ ವಯಸ್ಸಿನಿಂದಲೇ ಪಶುಪಾಲನೆ ಹೈನುಗಾರಿಕೆ ಮಾಡುತ್ತಿದ್ದಾರೆ. ಕೋಟಾದ ಮೀತು ಗುರ್ಜರ್ ಎಂಬ ಯುವತಿಯೇ ಈ ಸಾಧಕಿ. ಪಶುಪಾಲನೆ ಮೂಲಕ ಒಬ್ಬ ಸಾಫ್ಟ್ವೇರ್ ಉದ್ಯೋಗಿಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು ಎಂಬುವುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. […]