ಅನ್ನಭಾಗ್ಯ ಯೋಜನೆಯಡಿ ಜು.1 ರಿಂದ 10 ಕೆ.ಜಿ ಅಕ್ಕಿ ಕೊಡಲು ನಿರ್ಧಾರ: ಡಿಕೆಶಿ
ಮೈಸೂರು: ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ಕೇಂದ್ರ ಸರ್ಕಾರ ನಕಾರ ವಿಚಾರ ಕುರಿತಾಗಿ ಡ್ಕೆಶಿ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ವಿಮಾನನಿಲ್ದಾಣದಲ್ಲಿ ಮಾತನಾಡಿದ ಅವರು, ಅವರೇನು ಪುಕ್ಸಟ್ಟೆ ಅಕ್ಕಿ ಕೊಡುತ್ತಿಲ್ಲ. ನಾವೇನು ಪುಕ್ಸಟ್ಟೆ ಕೊಡಿ ಅಂತ ಕೇಳಿಲ್ಲ. ಬರುವ ಜುಲೈ ಒಂದರಂದು ಅನ್ನಭಾಗ್ಯ ಯೋಜನೆಯಡಿ ಹತ್ತು ಕೆ.ಜಿ ಅಕ್ಕಿ ಕೊಡಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ನಮಗೆ ಅಕ್ಕಿ ಕೊಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಅಕ್ಕಿ ಕೊಡುವುದಿಲ್ಲ ಎಂದು ವಿತ್ ಡ್ರಾ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಕೇಂದ್ರ […]