ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ
ಪ್ರಖ್ಯಾತ ವೈದ್ಯ, ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. 69 ವಯಸ್ಸಿನ ಭುಜಂಗ ಶೆಟ್ಟಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಆಸ್ಪತೆಗೆ ಎಂದಿನಂತೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಸಾಯಂಕಾಲ ಮನೆಗೆ ತೆರಳಿದ್ದಾರೆ. 6 ಗಂಟೆಗೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ಯಶವಂತಪುರದ ಕೋಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಭುಜಂಗ ಶೆಟ್ಟಿಯವರು ಬದುಕುಳಿಯಲಿಲ್ಲ. ಎಂದಿನಂತೆ ಇಂದು ಕೂಡ ರೋಗಿಗಳನ್ನ ತಪಾಸಣೆ ಮಾಡಿದ್ದಾರೆ. ಸಂಜೆ ಮನೆಗೆ ಹೋಗಿ ಜಿಮ್ ನಲ್ಲಿ ವ್ಯಾಯಾಮ ಮಾಡಿದ್ದಾರೆ. ಬಳಿಕ ಎದೆನೋವು ಕಾಣಿಸಿಕೊಂಡಿದೆ. ನಂತರ ತೀವ್ರ […]