ಸ್ನೇಹಿತರೊಂದಿಗೆ ರೀಲ್ಸ್ ಮಾಡಲು ಹೋಗಿ ಬಾವಿಗೆ ಬಿದ್ದ ಯುವಕ; ಮುಂದೇನಾಯ್ತು?
ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆಯೊಂದು ಮಹಾರಾಷ್ಟ್ರದ ದೊಂಬಿವ್ಲಿಯ ಠಾಕುರ್ಲಿ ಪ್ರದೇಶದಲ್ಲಿ ನಡೆದಿದೆ. ಯುವಕನೊಬ್ಬ ತನ್ನ ಸ್ನೇಹಿತರ ಜೊತೆಗೆ ರೀಲ್ಸ್ ಮಾಡಲು ತೆರಳಿ ಆಯತಪ್ಪಿ ಬ್ರಿಟಿಷರ ಕಾಲದ ಪಂಪ್ ಹೌಸ್ ನ ಬಾವಿಯಲ್ಲಿ ಮುಳುಗಿ ಬಿದ್ದು ಸಾವನ್ನಪ್ಪಿದ್ದಾನೆ. ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತೆರಳಿದ್ದ ಎನ್ನಲಾಗಿದೆ. ಸತತ 32 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಮೃತದೇಹವನ್ನು ಹುಡುಕಲಾಗಿದೆ. 18 ವರ್ಷದ ಬಿಲಾಲ್ ಸೊಹೈಲ್ ಶೇಖ್ ಎಂದು ಗುರುತಿಸಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ […]