ಹುಷಾರ್..! ಮಹಿಳೆಯರಿಗೆ ಒಳ್ಳೆ ಫಿಗರ್ ಅಂದ್ರೆ ಜೈಲು ಗ್ಯಾರಂಟಿ!
ಮಹಿಳಾ ಉದ್ಯೋಗಿಗಳಿಗೆ, ಸ್ನೇಹಿತೆಯರಿಗೆ, ಮಹಿಳೆಯರಿಗೆ ‘ನೀನು ಒಳ್ಳೆಯ ಫಿಗರ್ ಇದ್ದೀಯಾ, ಉತ್ತಮವಾಗಿ ಫಿಗರ್ ಮೇಂಟೇನ್ ಮಾಡಿದ್ದೀಯಾ, ನಮ್ಮೊಂದಿಗೆ ಆಚೆ ಬರುತ್ತೀಯಾ?’ ಎಂದು ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಸೆಷನ್ಸ್ ಕೋರ್ಟ್ ಹೇಳಿದೆ. ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಕಚೇರಿಯಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿದ್ದ 42 ವರ್ಷದ ಪುರುಷನೊಬ್ಬ ಈ ರೀತಿಯ ಪದಗಳನ್ನು ಮಹಿಳೆಗೆ ಬಳಸಿದ್ದ. ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಆತನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ […]