ಒಂದು ಗಂಟೆಯಲ್ಲಿ ಆಗಬೇಕಿದ್ದ ಶಸ್ತ್ರ ಚಿಕಿತ್ಸೆ ಕೇವಲ ಎರಡೂವರೆ ನಿಮಿಷದಲ್ಲಿ!
ಬೆಂಗಳೂರು: ಕೇವಲ ಎರಡೂವರೆ ನಿಮಿಷದಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವೈದ್ಯರ ತಂಡವೊಂದು ಅಚ್ಚರಿ ಮೂಡಿಸಿದೆ. ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ಡಾ ವಿಕ್ರಂ ಹುಡೇದ್ ಹಾಗೂ ಅವರ ತಂಡ 47 ವರ್ಷದ ವ್ಯಕ್ತಿಯೊಬ್ಬರಿಗೆ ಕೇವಲ ಎರಡೂವರೆ ನಿಮಿಷದಲ್ಲಿ ಬ್ರೈನ್ ಆಪರೇಷನ್ ಮಾಡಿ ವೈದ್ಯ ಲೋಕವೇ ಆಶ್ಚರ್ಯ ಪಡುವಂತೆ ಮಾಡಿದ್ದಾರೆ. ಬ್ರೈನ್ ಅನ್ಯೂರಿಸಂ ಎನ್ನುವ ಕಾಯಿಲೆಗೆ ಡಾ. ವಿಕ್ರಂ ಹುಡೆದ್ ಡಿವೈಸ್ ಒಂದರ ಮೂಲಕ ಕಾಲಿನಿಂದ ತಲೆಗೆ ಸಂಪರ್ಕ ಕಲ್ಪಿಸಿ ಬ್ರೈನ್ ಒಳಗೆ ಉಂಟಾಗಿದ್ದ ಗುಳ್ಳೆಯ […]