Agriculture: ಸಾವಯವ ಚಿಕ್ಕು ಮಾರಾಟ ಮಾಡಿ ಭರ್ಜರಿ ಲಾಭ ಮಾಡುತ್ತಿರುವ ರೈತರು!
ವಿಜಯಪುರ : ನಾವು ಯಾವುದೇ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೂ ಅಲ್ಲಿ ವಿವಿಧ ಬಗೆಯ ಹಣ್ಣುಗಳು ಹಾಗೂ ಇನ್ನಿತರ ವಸ್ತುಗಳ ಮಾರಾಟ ಮಾಡುವುದನ್ನು ನೋಡಿದ್ದೇವೆ. ಇವರೆಲ್ಲ ಮಧ್ಯವರ್ತಿಗಳ ಕಾಟವಿಲ್ಲದೆ, ಕಡಿಮೆ ಬೆಲೆಗೆ ಹಣ್ಣು ಖರೀದಿಸಿ, ಗ್ರಾಹಕರಿಗೂ ಯೋಗ್ಯದರದಲ್ಲಿ ಮಾರಾಟ ಮಾಡುತ್ತಿರುತ್ತಾರೆ. ಸದ್ಯ ಇಂತಹ ಮಾರಾಟಗಾರರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ವಿಜಯಪುರದಲ್ಲಿ ಮುಖ್ಯ ಬೆಳೆಯಾಗಿರುವ ಸಪೋಟಾ ಅಂದರೆ ಚಿಕ್ಕು ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸಾವಯವ ವಿಧಾನದಿಂದ ಬೆಳೆಯುವ ಈ ಚಿಕ್ಕುಗಳನ್ನು ನೇರವಾಗಿ ಜಮೀನಿನಿಂದ ಕಟಾವು ಮಾಡಿ ತಂದು ಮಾರಲಾಗುತ್ತಿದೆ. […]