Kornersite

Just In Sports

Asia Cup: ಏಷ್ಯಾಕಪ್ ಆಯೋಜನೆ ವಿವಾದ: ಭಾರತದಿಂದಾಗಿ ಪಾಕ್ ಗೆ ತೀವ್ರ ಮುಖಭಂಗ!

Dubai : ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB)ಯ ಏಷ್ಯಾಕಪ್‌ ಟೂರ್ನಿಯನ್ನು ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸುವ ಪ್ರಸ್ತಾವನೆಯನ್ನು ಸದಸ್ಯ ರಾಷ್ಟ್ರಗಳು ತಿರಸ್ಕರಿಸಿದ ನಂತರ ಏಷ್ಯಾಕಪ್‌ ಟೂರ್ನಿಯನ್ನು ಆ ದೇಶದಿಂದಲೇ ಸ್ಥಳಾಂತರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ.‌ ಸೆ. 2ರಿಂದ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್‌ ನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಅಫ್ಘಾನಿಸ್ತಾನ, ಶ್ರೀಲಂಕಾ (SriLanka) ಹಾಗೂ ಬಾಂಗ್ಲಾದೇಶ ಸೇರಿದಂತೆ ಒಟ್ಟು 6 ದೇಶಗಳು ಭಾಗವಹಿಸಲಿವೆ. ಶ್ರೀಲಂಕಾ ಮುಂಚೂಣಿಯಲ್ಲಿದ್ದು, ಈ ಬಾರಿ ಆತಿಥ್ಯ ವಹಿಸಿಕೊಳ್ಳುವ ಸಾಧ್ಯತೆಯಿದೆ. ಆತಿಥ್ಯ […]

International Just In

Imran Khan: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್!

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಪಾಕಿಸ್ತಾನದ ಹೈಕೋರ್ಟ್ ಆವರಣದಲ್ಲಿಯೇ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದೆ. ಹೀಗಾಗಿ ಕೋರ್ಟ್‌ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಮಾರ್ಚ್‌ ತಿಂಗಳಿನಲ್ಲಿ ಲಾಹೋರ್ ನಿವಾಸದಲ್ಲಿಯೇ ಇಮ್ರಾನ್‌ ಖಾನ್‌ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಪಿಟಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಬಂಧನವಾಗಿರಲಿಲ್ಲ. ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್‌ ಅನ್ನು ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ […]

International Just In National

ಪಾಕಿಸ್ತಾನದ ಜೈಲಿನಲ್ಲಿ ಸಾವಿರದಷ್ಟು ಭಾರತೀಯ ಮೀನುಗಾರರು!

Islamabad : ಪಾಕ್ ಗೆ ಸಂಬಂಧಿಸಿದ ಜಲಗಡಿಯೊಳಗೆ ಮೀನುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ 199 ಜನ ಭಾರತೀಯರನ್ನು (Indian Fishermen) ಶುಕ್ರವಾರ ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಲಿದ್ದಾರೆ. 199 ಮೀನುಗಾರರ ಬಿಡುಗಡೆ ಮಾಡಿ ಭಾರತಕ್ಕೆ (India) ವಾಪಸ್‌ ಕಳುಹಿಸಿ ಎಂದು ಸರ್ಕಾರಿ ಸಚಿವಾಲಯ ಹೇಳಿದೆ ಎಂದು ಸಿಂಧ್‌ನ ಜೈಲು ಮತ್ತು ತಿದ್ದುಪಡಿ ವಿಭಾಗದ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ಹೇಳಿದ್ದಾರೆ. ಈ ಮೀನುಗಾರರನ್ನು ಲಾಹೋರ್‌ ಗೆ ಕಳುಹಿಸಿ, ಅಲ್ಲಿಂದ ವಾಘಾ ಗಡಿ ಮೂಲಕ ಭಾರತೀಯ […]

Crime International

Crime News: ಪೊಲೀಸ್ ಠಾಣೆಯಲ್ಲಿ ಬಾಂಬ್ ಬ್ಲಾಸ್ಟ್; 12 ಜನ ಪೊಲೀಸರು ಬಲಿ!

ಪಾಕಿಸ್ತಾನದ ಸ್ವಾತ್ ಪ್ರದೇಶದಲ್ಲಿನ ಭಯೋತ್ಪಾದನಾ ನಿಗ್ರಹ ಇಲಾಖೆಯ ಪೊಲೀಸ್ ಠಾಣೆಯಲ್ಲಿ ನಡೆದ ಸ್ಪೋಟಗಳಲ್ಲಿ ಕನಿಷ್ಠ 12 ಜನ ಪೊಲೀಸರು ಸಾವನ್ನಪ್ಪಿ, 40ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಪೊಲೀಸ್ ಠಾಣೆಯೊಳಗೆ ಸಂಭವಿಸಿದ ಎರಡು ಸ್ಫೋಟಗಳಿಂದ ಕಟ್ಟಡ ನಾಶವಾಗಿದೆ. ಭದ್ರತಾ ಅಧಿಕಾರಿಗಳು ಪ್ರಾತ್ಯದಾದ್ಯಂತ ಹೆಚ್ಚಿನ ಅಲರ್ಟ್ ನಲ್ಲಿದ್ದರೂ ಈ ಘಟನೆ ನಡೆದಿದೆ ಎಂದು ಖೈಬರ್ ಪಖ್ತುಂಕ್ವಾ ಪೊಲೀಸ್ ಮಹಾನಿರೀಕ್ಷಿಕ ಅಖ್ತರ್ ಹಯಾತ್ ಖಾನ್ ತಿಳಿಸಿದ್ದಾರೆ. ಸಿಟಿಡಿ ಡಿಐಜಿ ಖಾಲಿದ್ ಸೊಹೈಲ್ ಮಾತನಾಡಿ, ಸ್ಫೋಟವು ಆತ್ಮಹತ್ಯಾ ದಾಳಿಯಲ್ಲ. ಮದ್ದುಗುಂಡುಗಳು […]