Crime News: ಪೊಲೀಸ್ ಠಾಣೆಯಲ್ಲಿ ಬಾಂಬ್ ಬ್ಲಾಸ್ಟ್; 12 ಜನ ಪೊಲೀಸರು ಬಲಿ!
ಪಾಕಿಸ್ತಾನದ ಸ್ವಾತ್ ಪ್ರದೇಶದಲ್ಲಿನ ಭಯೋತ್ಪಾದನಾ ನಿಗ್ರಹ ಇಲಾಖೆಯ ಪೊಲೀಸ್ ಠಾಣೆಯಲ್ಲಿ ನಡೆದ ಸ್ಪೋಟಗಳಲ್ಲಿ ಕನಿಷ್ಠ 12 ಜನ ಪೊಲೀಸರು ಸಾವನ್ನಪ್ಪಿ, 40ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಪೊಲೀಸ್ ಠಾಣೆಯೊಳಗೆ ಸಂಭವಿಸಿದ ಎರಡು ಸ್ಫೋಟಗಳಿಂದ ಕಟ್ಟಡ ನಾಶವಾಗಿದೆ. ಭದ್ರತಾ ಅಧಿಕಾರಿಗಳು ಪ್ರಾತ್ಯದಾದ್ಯಂತ ಹೆಚ್ಚಿನ ಅಲರ್ಟ್ ನಲ್ಲಿದ್ದರೂ ಈ ಘಟನೆ ನಡೆದಿದೆ ಎಂದು ಖೈಬರ್ ಪಖ್ತುಂಕ್ವಾ ಪೊಲೀಸ್ ಮಹಾನಿರೀಕ್ಷಿಕ ಅಖ್ತರ್ ಹಯಾತ್ ಖಾನ್ ತಿಳಿಸಿದ್ದಾರೆ. ಸಿಟಿಡಿ ಡಿಐಜಿ ಖಾಲಿದ್ ಸೊಹೈಲ್ ಮಾತನಾಡಿ, ಸ್ಫೋಟವು ಆತ್ಮಹತ್ಯಾ ದಾಳಿಯಲ್ಲ. ಮದ್ದುಗುಂಡುಗಳು […]