ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಗನನ್ನೇ ಕೊಲೆ ಮಾಡಿದ ಹೆತ್ತ ತಾಯಿ!
ಬೆಳಗಾವಿ: ತಾಯಿಯೊಬ್ಬಳು ಮಗನನ್ನೇ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹರಿಪ್ರಸಾದ್ ಬೋಸಲೆ(22) ಸಾವನ್ನಪ್ಪಿದ ದುರ್ದೈವ ಮಗ. ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಮಗ ಮನೆಯಲ್ಲಿ ಮಲಗಿದಲ್ಲಿಯೇ ಸಾವನ್ನಪ್ಪಿದ್ದ. ಅನುಮಾನಗೊಂಡ ತಂದೆ ದೂರು ದಾಖಲಿಸಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಪರೀಕ್ಷೆ ನಂತರ ಇದು ಅಸಹಜ ಸಾವಲ್ಲ, ಕೊಲೆ ಎಂಬುವುದು ತಿಳಿದು ಬಂದಿದೆ. ಕೊನೆಗೆ ತನಿಖೆ ಕೈಗೊಂಡಾಗ ತಾಯಿಯೇ ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಹರಿಪ್ರಸಾದ್ ನ ತಾಯಿ […]