ದೇಶದಲ್ಲಿ ಹೆಚ್ಚಾದ ಬಿಪೋರ್ ಜಾಯ್ ಸೈಕ್ಲೋನ್ ಭೀತಿ; ತೀವ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆ!
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿದ ಪರಿಣಾಮ ನೈರುತ್ಯ ಮುಂಗಾರು ಮಾರುತಗಳು ಈ ಬಾರಿ ತಡವಾಗಿವೆ. ಈ ವಾಯುಭಾರ ಕುಸಿತವು ಚಂಡಮಾರುತದ ಸ್ವರೂಪಕ್ಕೆ ತಿರುಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಇದೇ ರೀತಿಯ ವಾಯುಭಾರ ಕುಸಿತ ಮುಂದುವರೆದರೆ ಅದು ಚಂಡಮಾರುತದ ರೂಪ ಪಡೆಯಲಿದ್ದು, ಈಗಾಗಲೇ ಈ ಚಂಡಮಾರುತಕ್ಕೆ ಬಿಪರ್ಜಾಯ್ ಎಂದು ಹೆಸರಿಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತವು ಉತ್ತರ ದಿಕ್ಕಿಗೆ ಚಲಿಸುವ ಸೂಚನೆ ನೀಡಿದೆ. ಈ ಮೂಲಕ ಭಾರತದ ಪಶ್ಚಿಮ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳೂ ಇವೆ. ಗೋವಾ ಹಾಗೂ […]