ಕಾಂಗ್ರೆಸ್ ಶಾಸಕ ಕೊಟ್ಟ ಕುಕ್ಕರ್ ಬ್ಲಾಸ್ಟ್; ಸ್ಥಳೀಯರ ಆಕ್ರೋಶ
Ramanagar : ಕುಕ್ಕರ್ ಸ್ಫೋಟಗೊಂಡ ಪರಿಣಾಮ (Cooker Blast) ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ (Ramanagara) ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. 17 ವರ್ಷದ ಮಹಾಲಕ್ಷ್ಮೀ ಗಾಯಗೊಂಡಿದ್ದು, ಮುಖದ ಮೇಲೆ ಸುಟ್ಟ ಗಾಯಗಳಾಗಿವೆ. ಕೂಡಲೇ ಮಹಾಲಾಕ್ಷ್ಮೀಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾಂಗ್ರೆಸ್ (Congress) ಶಾಸಕ ಹೆಚ್.ಸಿ ಬಾಲಕೃಷ್ಣ (H C Balakrishna) ಈ ಕುಕ್ಕರ್ ಗಳನ್ನು ವಿತರಿಸಿದ್ದರು ಎನ್ನಲಾಗಿದೆ. ಶಾಸಕ ಹೆಚ್.ಸಿ ಬಾಲಕೃಷ್ಣ ಈ ಕುಕ್ಕರ್ ನೀಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. […]