ಶ್ರಾವಣ, ಗಣೇಶ ಹಬ್ಬಕ್ಕೆ ಮಾಂಸ ಬಿಟ್ಟವರಿಗೆ ಬಿಗ್ ಶಾಕ್!
ಶ್ರಾವಣ ಮಾಸ ಹಾಗೂ ಗಣೇಶ ಚತುರ್ಥಿ ಮುಗಿಯುತ್ತಿದ್ದಂತೆ ಚಿಕನ್ ಹಾಗೂ ಮಟನ್ ಪ್ರಿಯರ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಹೀಗಾಗಿ ದರದಲ್ಲಿ ಕೂಡ ಏರಿಕೆಯಾಗಿದೆ. ಉತ್ಪಾದನೆ ವೆಚ್ಚ ಏರಿಕೆಯಾದ ಹಿನ್ನೆಲೆಯಲ್ಲಿ ಲೈವ್ ಕೋಳಿ ಕೆ.ಜಿ.ಗೆ 95 ರೂ. ನಿಂದ 110 ರೂ.ಗೆ ಏರಿಕೆ ಕಂಡಿದೆ. ಅಲ್ಲದೇ, ಇನ್ನೂ ಹಲವೆಡೆ ಗಣೇಶನ ಉತ್ಸವ ಮುಗಿಯದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಶ್ರಾವಣ ಮಾಸದಲ್ಲಿ ಬಹುತೇಕರು ಮಾಂಸಾಹಾರ ಸೇವಿಸುವುದಿಲ್ಲ. ಕೆಲವೆಡೆ ಗಣೇಶನನ್ನು ಕೂರಿಸಿದ್ದರೆ, ಅದರ ವಿಸರ್ಜನೆಯಾಗುವವರೆಗೆ […]