Kornersite

Just In National Uttar Pradesh

ರೀಲ್ಸ್ ಮಾಡ್ತಿದ್ದ ಬಾಲಕ; ಸಡನ್ ಆಗಿ ಬಂದ ರೈಲು! ಮುಂದೇನಾಯ್ತು?

ಇತ್ತೀಚೆಗೆ ಯುವ ಪೀಳಿಗೆ ರೀಲ್ಸ್ ವ್ಯಾಮೋಹಕ್ಕೆ ಸಿಲುಕಿದ್ದು, ಸಾವನ್ನು ಕೂಡ ಆಹ್ವಾನಿಸುತ್ತಿದ್ದಾರೆ. ಈ ಸಾಲಿಗೆ ಮತ್ತೊಂದು ಸಾವಿನ ಪ್ರಕರಣ ಸೇರಿದೆ. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ರೀಲ್ಸ್ ಮಾಡಲು ಹೋಗಿ ಅಪ್ರಾಪ್ತ ಬಾಲಕ ಸಾವನ್ನಪ್ಪಿದ್ದಾನೆ. ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ರೈಲು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತ ಸಾಯುವ ಕೊನೆ ಕ್ಷಣದ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. 14 ವರ್ಷದ ಫಾರ್ಮನ್ ಎಂಬ ಬಾಲಕ […]

Just In

ವಿಡಿಯೋ ಕ್ರಿಯೇಟರ್ಸ್ ಗೆ ಗುಡ್ ನ್ಯೂಸ್ ಕೊಟ್ಟ ಯೂ ಟ್ಯೂಬ್!

ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ಗಳಲ್ಲಿ ಯೂಟ್ಯೂಬ್‌ ಕೂಡ ಒಂದು. ವೀಡಿಯೊ ಮತ್ತು ಮ್ಯೂಸಿಕ್‌ ಎರಡನ್ನೂ ಒಳಗೊಂಡಿರುವ ಯೂಟ್ಯೂಬ್‌ ಮನರಂಜನೆಗೆ ಹೇಳಿ ಮಾಡಿಸಿದ ತಾಣ. ಯೂಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ ಹಾಗೂ ಟೂಲ್‌ಗಳನ್ನು ಪರಿಚಯಿಸುತ್ತಿದೆ. ಯುಟ್ಯೂಬ್‌ ಬಳಕೆದಾರರ ಅನುಕೂಲಕ್ಕಾಗಿ ಹೊಸ ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಯೂಟ್ಯೂಬ್‌ ಹೊಸ ಅಪ್ಲಿಕೇಶನ್‌ ಮತ್ತು ಹೊಸ ಎಐ ಚಾಲಿತ ಫೀಚರ್ಸ್‌ಗಳನ್ನು ಘೋಷಣೆ ಮಾಡಿದೆ. ವೀಡಿಯೊ ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡುವ ಯೂಟ್ಯೂಬ್‌ ಕ್ರಿಯೆಟ್‌ ಆ್ಯಪ್‌ ಪರಿಚಯಿಸಿದೆ. ಇದರೊಂದಿಗೆ ಡ್ರೀಮ್‌ ಸ್ಕ್ರೀನ್‌ […]

Crime Just In National

ವಿದ್ಯಾರ್ಥಿಗಳಿದ್ದ ಶಾಲಾ ವಾಹನ ನಿಲ್ಲಿಸಿ ಗನ್ ತೋರಿಸಿದ ದುಷ್ಕರ್ಮಿಗಳು!

ಪುಟ್ಟ ವಿದ್ಯಾರ್ಥಿಗಳಿದ್ದ ಶಾಲಾ ವಾಹನವನ್ನು ಕಿಡಿಗೇಡಿಗಳ ಗುಂಪೊಂದು ಏಕಾಏಕಿ ನಿಲ್ಲಿಸಿ, ಗನ್ ಝಳಪಿಸಿ ರೀಲ್ಸ್ ಮಾಡಿರುವ ಆಘಾತಕಾರಿ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಹಾರದ ಮುಜಾಫರ್ ಪುರ್ ಜಿಲ್ಲೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿದ್ದ ಶಾಲಾ ವಾಹನವನ್ನು ಬೈಕ್ ಸವಾರರ ಗುಂಪು ತಡೆದಿದೆ. ನಂತರ ಆ ವಾಹನದ ಮುಂದೆ ಗನ್ ಝಳಪಿಸಿ ವೀಡಿಯೋ ಮಾಡಿಕೊಳ್ಳಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಘಟನೆಯ ವೀಡಿಯೋಗಳನ್ನು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಅಪ್‍ಲೋಡ್ ಮಾಡಲಾಗಿದ್ದು, […]

Just In National

ವಿಮಾನದ ರೆಕ್ಕೆಗಳ ಮೇಲೆ ಹುಚ್ಚಾಟ!

ಪ್ರಯಾಣಿಕರಿಗಾಗಿ ಕಾಯುತ್ತಿದ್ದ ವಿಮಾನದ ರೆಕ್ಕೆಯ ಮೇಲೆ ಸಿಬ್ಬಂದಿ ಸ್ಟಂಟ್ ಮಾಡಿರುವ ದೃಶ್ಯವೊಂದು ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಸ್ವಿಸ್ ಇಂಟರ್‌ನ್ಯಾಶನಲ್ ಏರ್ ಲೈನ್ಸ್‌ನ ಸಿಬ್ಬಂದಿ ಬೋಯಿಂಗ್ 777 ವಿಮಾನದ ರೆಕ್ಕೆಯ ಮೇಲೆ ನರ್ತಿಸುತ್ತ ಫೋಟೋ ತೆಗೆಸಿಕೊಂಡಿದ್ದಾರೆ. ಮೊದಲು ಮಹಿಳಾ ಸಿಬ್ಬಂದಿ ಬಂದಿದ್ದಾರೆ. ಆ ನಂತರ ನಂತರ ಪುರುಷ ಸಿಬ್ಬಂದಿ ಬಂದಿದ್ದಾರೆ. ವಿಡಿಯೋ ನೋಡಿದ ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಆಡಳಿತವು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ವಿಮಾನಯಾನ ಸಂಸ್ಥೆಯು ಇಂಥ ನಡೆವಳಿಕೆಯನ್ನು ಸಹಿಸುವುದಿಲ್ಲ ಎಂದು […]

Crime Just In Karnataka State

Crime News: ರೀಲ್ಸ್ ಮಾಡುತ್ತಾಳೆಂಬ ಕಾರಣಕ್ಕೆ ಈ ಪಾಗಲ್ ಪ್ರೇಮಿ ಮಾಡಿದ್ದೇನು?

ಯುವತಿ ರೀಲ್ಸ್ ಮಾಡುತ್ತಾಳೆ ಎಂಬ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಯನ್ನೇ (Young Woman) ಪಾಗಲ್ ಪ್ರೇಮಿಯೊಬ್ಬ ಕೊಲೆಗೈದು, ಮೃತದೇಹ ಸುಟ್ಟು ಹಾಕಿದ್ದಾನೆ. ಯಾದಗಿರಿ (Yadagiri) ತಾಲೂಕಿನ ಅರಕೇರಾದ ಪಂಚಶೀಲ ನಗರದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) ಆರೋಪಿಯನ್ನು ಬಂಧಿಸಿದ್ದಾರೆ. ಮೃತ ಯುವತಿಯನ್ನು 25 ವರ್ಷದ ಅಂತಿಮಾ ವರ್ಮಾ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಉತ್ತರ ಪ್ರದೇಶದ (Uttar Pradesh) ಮೂಲದ ನಿವಾಸಿ ಎನ್ನಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ಸಹೋದರನೊಂದಿಗೆ ವಾಸಿಸುತ್ತಿದ್ದ […]