ತಂಬಾಕು ಜಾಹೀರಾತು ತಿರಸ್ಕರಿಸಿದ ಸಚಿನ್; ಸತ್ಯ ಬಹಿರಂಗ ಪಡಿಸಿದ ಲೆಜೆಂಡ್!
ಕ್ರಿಕೆಟ್ ಲೋಕದ ದಂತಕಥೆ ಸಚಿನ್ ತೆಂಡೂಲ್ಕರ್ ತಂಬಾಕು ಜಾಹಿರಾತಿನಲ್ಲಿ ನಟಿಸದಿರುವುದಕ್ಕೆ ತಂದೆಯ ಸಲಹೆಯೇ ಕಾರಣ ಎಂದು ಹೇಳಿದ್ದಾರೆ. ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವುದಕ್ಕೆ, ಪ್ರೊಮೋಟ್ ಮಾಡುವುದಕ್ಕಾಗಿ ಸಾಕಷ್ಟು ಜಾಹೀರಾತು ಅವಕಾಶಗಳು ಬಂದಿದ್ದವು. ಜೀವನದ ಗುರಿಗಳನ್ನು ಸಾಧಿಸುವುದಕ್ಕೆ ಫಿಟ್ನೆಸ್ ಬಗ್ಗೆ ಶಿಸ್ತನ್ನು ಬೆಳೆಸಿಕೊಳ್ಳುವುದು, ಜಾಗೃತರಾಗಿರುವುದು ಬಹಳ ಮುಖ್ಯ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದು, ತಂಬಾಕು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದಿದ್ದಾರೆ. ಬಾಯಿಯ ನೈರ್ಮಲ್ಯ ಅಭಿಯಾನದ ಭಾಗವಾಗಿರುವ ಮಹಾರಾಷ್ಟ್ರ ಸರ್ಕಾರದ ಸ್ವಚ್ಛ ಮುಖ್ ಅಭಿಯಾನ್ (ಎಸ್ಎಂಎ) ಗೆ ನಗುವಿನ ರಾಯಭಾರಿ (Smile Ambassador)ಯಾಗಿ […]