New Parliament: ನೂತನ ಸಂಸತ್ ನಲ್ಲಿ ನ್ಯಾಯ ಸಂಕೇತಿಸುವ ಚಿನ್ನದ ದಂಡ ಪ್ರತಿಷ್ಠಾಪಿಸಿದ ಮೋದಿ!
ನವದೆಹಲಿ: ನೂತನ ಸಂಸತ್ (New Parliament) ಸೆಂಟ್ರಲ್ ವಿಸ್ತಾ (Central Vista) ದ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ರಾಜದಂಡ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ರಾಜದಂಡವನ್ನು ಲೋಕಸಭೆಯ ಸ್ಪೀಕರ್ ಆಸನದ ಪಕ್ಕದಲ್ಲಿಯೇ ಅಳವಡಿಸಲಾಗಿದೆ. ಭಾರತಕ್ಕೆ ಅಧಿಕಾರ ಹಸ್ತಾಂತರ ಪ್ರತೀಕವಾಗಿದ್ದ ಸೆಂಗೊಲ್, 75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ವಿಶೇಷ ಮಾನ್ಯತೆ ಪಡೆದಿದೆ. ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ […]