ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ! ಐವರಿಗೆ ಚಾಕು ಇರಿತ!
ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಹತ್ತಿರ ಕಳೆದ ರಾತ್ರಿ ನಡೆದಿದೆ. ಘಟನೆಯಲ್ಲಿ ಐವರಿಗೆ ಚಾಕು ಇರಿಯಲಾಗಿದ್ದು, ಆ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪವನ್ ಹಾಗೂ ಕಿರಣ್ ಸ್ನೇಹಿತರಾಗಿದ್ದು, ಇವರ ಗುಂಪುಗಳ ಮಧ್ಯೆಯೇ ಸಂಘರ್ಷ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಈ ಗುಂಪುಗಳ ಮಧ್ಯೆ ಸಣ್ಮಪುಟ್ಟ ಗಲಾಟೆ ನಡೆಯುತ್ತಿತ್ತು. ಅಲ್ಲದೇ, ಕಳೆದ ರಾತ್ರಿ ನೇತಾಜಿ ಸರ್ಕಲ್ ನಲ್ಲಿ ಇಬ್ಬರ ಮಧ್ಯೆ […]