Aravinda Bellada: ಅಭಿಮಾನಿ ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ತಲೆ ಮೇಲೆ ಇಟ್ಟುಕೊಂಡ ಶಾಸಕ!
Dharwad : ಅಭಿಮಾನಿಯೊಬ್ಬರು ನೀಡಿದ್ದ ಪಾದರಕ್ಷೆಯನ್ನು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಅವರು ಕಣ್ಣಿಗೆ ಒತ್ತಿಕೊಂಡು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದಾರೆ. ಬೆಲ್ಲದ್ ನಿವಾಸದಲ್ಲಿ ಸಮ್ಗರ್ (ಚಮ್ಮಾರ) ಸಮುದಾಯದ ನಿಯೋಗವು ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ಕಣ್ಣಿಗೆ ಒತ್ತಿಕೊಂಡು ತಲೆ ಮೇಲೆ ಇಟ್ಟುಕೊಂಡಿದ್ದಾರೆ. ಬೆಲ್ಲದ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅವರನ್ನು ಹೊಗಳಿದರೆ ಇನ್ನು ಕೆಲವರು ಇದೊಂದು ರಾಜಕೀಯ ಗಿಮಿಕ್ ಎಂದಿದ್ದಾರೆ. ಉಡುಗೊರೆಯನ್ನು […]