Kornersite

Bengaluru Just In Karnataka State

ಈ ತಿಂಗಳಿಂದ ಅನ್ನಭಾಗ್ಯದಡಿ ಪೂರ್ಣ ಅಕ್ಕಿ!

ಈ ತಿಂಗಳಲ್ಲಿಯೇ ಅನ್ನಭಾಗ್ಯ ಯೋಜನೆಯ ಪೂರ್ಣ ಪ್ರಮಾಣದ ಅಕ್ಕಿ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ವಿಧಾನಸೌದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಟೋಬರ್ ತಿಂಗಳಲ್ಲಿಯೇ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲು ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲಿಯೇ ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಸದ್ಯ ಬರದ ವಾತಾವರಣ ಇದ್ದರೂ ಮುಂದೆ ಮಳೆಯಾಗುವ ಸಾಧ್ಯತೆ ಇದೆ. ಕೃಷಿ ಸುಧಾರಿಸುವ ನಿರೀಕ್ಷೆ ಇದೆ […]

Just In Karnataka State

ಸಂಕಷ್ಟದಲ್ಲಿ ರೈತರು; ಸರಳ ದಸರಾಕ್ಕೆ ಸರ್ಕಾರ ನಿರ್ಧಾರ!

ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರೈತ ವಲಯ ಸಂಕಷ್ಟದಲ್ಲಿದೆ. ಹೀಗಾಗಿ ಪ್ರಸಕ್ತ ವರ್ಷ ಸರಳ ಹಾಗೂ ಅರ್ಥಪೂರ್ಣ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಈ ಕುರಿತಾಗಿ ಟ್ವಿಟರ್‌ ಮೂಲಕ ಮಾಹಿತಿ ನೀಡಿರುವ ಅವರು, ರಾಜ್ಯದಲ್ಲಿ ಮಳೆ ಕಡಿಮೆಯಾಗಿರುವುದರಿಂದಾಗಿ ರೈತಾಪಿ ವರ್ಗವು ಸಂಕಷ್ಟದಲ್ಲಿದ್ದು, ಈ ಬಾರಿ ಸರಳ ಹಾಗೂ ಅರ್ಥಪೂರ್ಣ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಬರಸಿಡಿಲು […]

Just In Karnataka Politics State

ನಮ್ಮ ರಾಜ್ಯ ದಿವಾಳಿಯಾಗಿಲ್ಲ ಮೋದಿಯವರೇ; ಸಿಎಂ

ಮೈಸೂರು : ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾಗಿದ್ದ ಗೃಹಲಕ್ಷ್ಮಿ ಯೋಜನೆಗೆ (Gruhakshmi Scheme) ಇಂದು ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನೂರು ದಿನಗಳ ಸರ್ಕಾರದ ಸಾಧನೆಯ ಕೈಪಿಡಿ ಹೊರ ತರಲಾಗಿದೆ. ಗೃಹಲಕ್ಷ್ಮಿ ಯೋಜನೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah), ಇದಕ್ಕೂ ಮುನ್ನ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ 165 ಭರಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿತ್ತು. ಈಗ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ. ನಾವು ಗ್ಯಾರಂಟಿಗಳನ್ನು […]

Bengaluru Just In Karnataka Politics State

ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ನಿಂದ ನೋಟಿಸ್ ಜಾರಿ!

ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷ ಮತದಾರರಿಗೆ ಆಮಿಷ ಒಡ್ದಿದ್ದರು. ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿ ಆಮಿಷ ಒಡ್ಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಮತದಾರರಿಗೆ ಆಮಿಷ ಒಡ್ಡುವಂತಿಲ್ಲ. ಹೀಗಾಗಿ ಸಿದ್ದರಾಮಯ್ಯ ಆಯ್ಕೆ ಅಸಿಂಧುಗೊಳಿಸುವಂತೆ ಕೋರಿ ಕೆ.ಎಂ. ಶಂಕರ ಎಂಬುವವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ.

Bengaluru Just In Karnataka Politics State

ಗೃಹ ಜ್ಯೋತಿಗೆ 34 ಲಕ್ಷ ಅರ್ಜಿ ಸಲ್ಲಿಕೆ: 13 ದಿನಗಳಲ್ಲಿ 6.75 ಕೋಟಿ ಮಹಿಳೆಯರ ಉಚಿತ ಬಸ್ ಪ್ರಯಾಣ

ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಸ್ಕೀಮ್ ಅನೌನ್ಸ್ ಮಾಡ್ತಾ ಇದ್ದಂತೆ ಇಲ್ಲಿಯವರೆಗೂ ಬರೋಬ್ಬರಿ 34 ಲಕ್ಷ ಅರ್ಜಿಗಳಿ ಸಲ್ಲಿಕೆಯಾಗಿವೆ. ಕೇವಲ ಗೃಹ ಜ್ಯೋತಿ ಮಾತ್ರವಲ್ಲ ಶಕ್ತಿ ಯೋಜನೆ ಅಡಿಯಲ್ಲಿ ಕಳೆದ ಹದಿಮೂರು ದಿನಗಳಲ್ಲಿ 6.75 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಸರ್ಕಾರದ ಉಚಿತ ಯೋಜನೆಗೆ ಸಿಕ್ಕಾಪಟ್ಟೆ ಭರ್ಜರಿ ರಿಸ್ಪಾನ್ಸ್ ಸಿಕ್ಕಿದೆ. ಇಂಧನ ಇಲಾಖೆ ಹಾಗೂ ಸಾರಿಗೆ ಇಲಾಖೆ ನೀಡಿರುವ ಅಂಕಿ ಅಂಶಗಳಿದು. ಇಂಧನ ಇಲಾಖೆಯ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ 34 […]

Bengaluru Just In Karnataka Politics State

ಸಿಎಂ ಜೊತೆ ಚರ್ಚೆ ಮಾಡಿ ಗೃಹ ಲಕ್ಷ್ಮೀ ಹೋಲ್ಡ್ ಮಾಡಿದ್ದೇನೆ ಎಂದ ಡಿಕೆಶಿ!

ಸಿಎಂ ಜೊತೆ ಮಾತನಾಡಿ ನಾನೇ ಗೃಹಲಕ್ಷ್ಮಿ (Gruhalakshmi Scheme) ಯೋಜನೆಯನ್ನು ಹೋಲ್ಡ್ ಮಾಡಿದ್ದೇನೆ . ಇದರಿಂದಾಗಿ ಗಲಾಟೆ ಕಡಿಮೆ ಮಾಡಿಸಲು ಹೀಗೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ (Chief Minister) ಅವರೊಂದಿಗೆ ಮಾತನಾಡಿ ಗೃಹಲಕ್ಷ್ಮಿಯನ್ನು ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಗಲಾಟೆ ಕಡಿಮೆ ಮಾಡಲು ಹೀಗೆ ಮಾಡಿದ್ದೇನೆ. ಮಹಿಳಾ ಸಚಿವರೊಂದಿಗೆ ಒಂದು ಸಭೆ ಮಾಡಿ, ಸರಳವಾಗಿ ಯೋಜನೆ ಅನುಷ್ಠಾನ ಮಾಡ್ತೀವಿ. ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನಕ್ಕೆ […]

Bengaluru Just In Karnataka Politics State

15 IPS ಅಧಿಕಾರಿಗಳ ವರ್ಗಾವಣೆ: ಪಟ್ಟಿ ಹೀಗಿದೆ ನೋಡಿ

Bangalore: 15 ಐಪಿಎಸ್ ಅಧಿಕಾರಿಗಳನ್ನ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ವಿವರ ಇಲ್ಲಿದೆ- ರಾಮಚಂದ್ರ ರಾವ್- ಎಡಿಜಿಪಿ, ಪೊಲೀಸ್​ ಗೃಹ ನಿರ್ಮಾಣ ನಿಗಮ ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ, ಬಂದಿಖಾನೆ ಅರುಣ್ ಚಕ್ರವರ್ತಿ- ಎಡಿಜಿಪಿ, ಡಿಸಿಆರ್​ಇ ಮನೀಷ್ ಕರ್ಬಿಕರ್- ಎಡಿಜಿಪಿ, ಸಿಐಡಿ ಚಂದ್ರಶೇಖರ್- ಐಎಸ್ ಡಿ, ಎಡಿಜಿಪಿ ವಿಪುಲ್ ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಲಯ ಪ್ರವೀಣ್ ಮಧುಕರ್ ಪವಾರ್- ಐಜಿಪಿ ಸಿಐಡಿ ಸತೀಶ್ ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ […]

Bengaluru Just In Karnataka Politics State

ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಇಂದಿರಾ ಕ್ಯಾಂಟೀನ್-ಏನೆಲ್ಲ ಸಿಗಲಿದೆ..? ಇಲ್ಲಿದೆ ಕಂಪ್ಲೀಟ್ ಲಿಸ್ಟ್!!

ಇಂದಿರಾ ಕ್ಯಾಂಟೀನ್ ಹೈ ಟೆಕ್ ರೀತಿಯಲ್ಲಿ ಬರಲಿದೆ. ಬಗೆ ಬಗೆಯ ತಿಂಡಿ ತಿನಿಸುಗಳೊಂದಿಗೆ ಲೋಕಾರ್ಪಣೆಗೊಳ್ಳಲಿದೆ ಇಂದಿರಾ ಕ್ಯಾಂಟೀನ್. ಇಂದಿರಾ ಕ್ಯಾಂಟೀನ್ ನಲ್ಲಿ ದರ್ಶಿನಿ ರೇಂಜ್ ಗೆ ಮೆನ್ಯೂ ರೆಡಿಯಾಗಿದೆ. ಹಿಂದಿನ ಮೆನೂಗೆ ಹಲವು ಬದಲಾವಣೆ ಮಾಡಿರುವ ಬಿಬಿಎಂಪಿ. ಇಂದಿರಾ ಕ್ಯಾಂಟೀನ್ ನ್ಯೂ ಮೆನೂ ಈ ರೀತಿಯಾಗಿದೆ- • ಇಡ್ಲಿ ಚಟ್ನಿ/ ಸಾಂಬಾರ್ • ಬ್ರೆಡ್ & ಜಾಮ್ • ಮಂಗಳೂರು ಬನ್ಸ್ • ಬೇಕರಿ ಬನ್ • ಪಲಾವ್ • ಟೊಮ್ಯಾಟೊ ಬಾತ್ • ಖಾರಾ ಪೊಂಗಲ್ […]

Bengaluru Just In Karnataka Politics State

ಇಂದಿನಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ

ಇಂದಿನಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈ ಯೋಜನೆ ಜುಲೈ 1ಕ್ಕೆ ಆರಂಭವಾಗಲಿದೆ. ಆದರೆ ಯೋಜನೆ ಆರಂಭಕ್ಕು ಮುನ್ನ ಅರ್ಜಿ ಸಲ್ಲಿಸಬೇಕು. ಇಂದಿನಿಂದ ಈ ಅರ್ಜಿ ಸಲ್ಲಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್ ನಲ್ಲಿ ಕೆಲ ಬದಲಾವಣೆಯಿಂದಾಗಿ ಅರ್ಜಿ ಸಲ್ಲಿಕೆಗೆ ವಿಳಂಭವಾಗಿದೆ. ಸದ್ಯ ಎಲ್ಲವೂ ಸರಿಯಾಗಿದ್ದು, ಇಂದಿನಿಂದಲೇ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ? https://sevasindhugss.karnataka.gov.in/ ಈ ಲಿಂಕ್ ಕ್ಲಿಕ್ ಮಾಡಿ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 1912ಕ್ಕೆ ಕರೆ ಮಾಡಿ ಮಾಹಿತಿ […]

Bengaluru Just In Karnataka Politics State

Free Bus Ticket For Women: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಜ್ಯ; ಚಾಲನೆ ನೀಡಲಿರುವ ಸಿಎಂ!

ಬೆಂಗಳೂರು : ಇಂದಿನಿಂದ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಸೇವೆ ಇಂದಿನಿಂದ ಲಭ್ಯವಾಗಲಿದೆ. ಈ ಉಚಿತ ಬಸ್ (Free Bus Ticket For Women) ಪ್ರಯಾಣಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ ಮಹಿಳಾ ಮಣಿಗಳಿಗೆ ಇಂದಿನಿಂದ ಉಚಿತ ಬಸ್ ಪ್ರಯಾಣ, ಎಲ್ಲಿ ಬೇಕಾದರೂ ಸಂಚಾರ ಮಾಡಬಹುದಾಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಪೈಕಿ ಮೊದಲ ಯೋಜನೆಯಾದ ಮಹಿಳೆಯರಿಗೆ ಉಚಿತವಾಗಿ ಸಂಚರಿಸಲು ಅವಕಾಶ ನೀಡುವ ಶಕ್ತಿ ಯೋಜನೆಗೆ ಇಂದು ಬೆಳಗ್ಗೆ 11ಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ. […]