ಮಹಾರಾಷ್ಟ್ರದಲ್ಲಿ ಕೋಮು ಗಲಭೆ; ಓರ್ವ ಸಾವು, 13 ಜನರ ಸ್ಥಿತಿ ಗಂಭೀರ!
ಮಹಾರಾಷ್ಟ್ರದ ಅಕೋಲ ಹಾಗೂ ಶೆವ್ಗಾಂವ್ ನಲ್ಲಿ 2 ದಿನಗಳಿಂದ ಕೋಮು ಗಲಭೆ ಉಂಟಾಗಿದ್ದು, ಈ ಕಿಚ್ಚು ಬೇರೆಡೆ ಹರಡದಂತೆ ತಡೆಯಲು ಮಹಾರಾಷ್ಟ್ರ ಪೊಲೀಸರು ಹೈರಾಣಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಇಲ್ಲಿಯವರೆಗೆ 130 ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, 13 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ರಾಜ್ಯ ಸಚಿವ ಗಿರೀಶ್ ಮಹಾಜನ್ ಅಕೋಲಾದಲ್ಲಿನ ಗಲಭೆ ಕುರಿತು ಮಾತನಾಡಿದ್ದು, ಅಕೋಲಾದ ಗಲಭೆ ಪೂರ್ವಯೋಜಿತವಾಗಿದೆ ಎಂದು ಆರೋಪಿಸಿದ್ದರೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಕೆಲವು ಮಂದಿ ಹಾಗೂ ಸಂಘಟನೆಗಳು […]