Hospital: ಮಧ್ಯಪ್ರದೇಶದಲ್ಲಿ ಮನಕಲಕುವ ಘಟನೆ; ಆಸ್ಪತ್ರೆ ಮೆಟ್ಟಿಲ ಮೇಲೆಯೇ ಹೆರಿಗೆ!
ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ಮೆಟ್ಟಿಲು ಮೇಲೆಯೇ ಹೆರಿಗೆಯಾಗಿರುವ ಮನ ಕಲಕುವ ಘಟನೆ ಮಧ್ಯಪ್ರದೇಶ(Madhya Pradesh)ದಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಿವಪುರಿಯಲ್ಲಿರುವ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ಅರುಣ್ ಪರಿಹಾರ್ ಎಂಬ ವ್ಯಕ್ತಿಯ ಪತ್ನಿಗೆ ಬೆಳಿಗ್ಗೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆ ವ್ಯಕ್ತಿ ಜನನಿ ಎಕ್ಸ್ ಪ್ರೆಸ್ ಗೆ ಕರೆ ಮಾಡಿದ್ದಾನೆ. ಆದರೆ, ಅದು ಕೂಡ ತಡವಾಗಿ ಬಂದಿದೆ. ಇನ್ನೇನು ಆಸ್ಪತ್ರೆಗಾದರೂ ಬೇಗ ಸಾಗಿಸಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದರೆ, […]