ಹಾಲಶ್ರೀ ಸ್ವಾಮೀಯ ಮತ್ತೊಂದು ಮುಖವಾಡ ಬಯಲು; ಮತ್ತೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ದೋಖಾ!
ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ಚೈತ್ರಾ ಕುಂದಾಪುರ ಪ್ರಕರಣದ ಮೂರನೇ ಆರೋಪಿಯಾಗಿರುವ ಹಾಲಶ್ರೀಯ ಮತ್ತೊಂದು ಇಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಸೆ. 19ರಂದು ಈ ದೂರು ದಾಖಲಾಗಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರುನಲ್ಲಿ ಪಿಡಿಒ ಸಂಜಯ್ ಚವಡಾಳ ಎಂಬುವವರು ಈ ದೂರು ಸಲ್ಲಿಸಿದ್ದಾರೆ. 2023 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಹಾಲಶ್ರೀ ಸ್ವಾಮೀಜಿಗಳನ್ನು ನಾನು ಸಂಪರ್ಕಿಸಿದ್ದೆ. ಟಿಕೆಟ್ ಗಾಗಿ ಅವರು 1 ಕೋಟಿ […]