ನಡು ರಸ್ತೆಯಲ್ಲಿಯೇ ಮಹಿಳೆಯ ಬರ್ಬರ ಹತ್ಯೆ; ಕುತ್ತಿಗೆಯಲ್ಲಿಯೇ ಚಾಕು ಇಟ್ಟು ಪರಾರಿ!
ವಿಜಯಪುರ: ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲಿಯೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಗಂಗೂಬಾಯಿ ಯಂಕಂಚಿ(28) ಹತ್ಯೆಯಾದ ಯುವತಿ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಗಂಗೂಬಾಯಿ ಅವರು ತಮ್ಮ ಸ್ಕೂಟಿಯಲ್ಲಿ ಸಿಂದಗಿ ಪಟ್ಟಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊರವಲಯದ ಕೊಬೊಟೊ ಶೋರೂಂ ಬಳಿ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ, ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹತ್ಯೆಯ ನಂತರ ಗಂಗೂಬಾಯಿ ಕುತ್ತಿಗೆಯಲ್ಲೆ ಚಾಕು ಬಿಟ್ಟು ಆಕೆಯ ಸ್ಕೂಟಿ ಜೊತೆ ಪರಾರಿಯಾಗಿದ್ದಾರೆ. […]