ನೌಕಾಪಡೆಗೆ ಮತ್ತೊಂದು ಗರಿ; ಮಹೇಂದ್ರಗಿರಿ ಯುದ್ಧ ನೌಕೆ ಲೋಕಾರ್ಪಣೆ!
ಭಾರತದ ನೌಕಾಪಡೆಯ ಬಲ ಹೆಚ್ಚಿಸಲು ಹೊಸ ಯುದ್ಧ ಹಡಗು ಮಹೇಂದ್ರಗಿರಿ ಮುಂದಾಗಿದ್ದು, ಸೆಪ್ಟೆಂಬರ್ 1ರಂದು ಉಪರಾಷ್ಟ್ರಪತಿ ಜಗದೀಪ್ ಧನಖರ್ ಅವರ ಪತ್ನಿ ಸುದೇಶ್ ಧನಖರ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಮಹೇಂದ್ರಗಿರಿಯು ಪ್ರಾಜೆಕ್ಟ್ 17ಎ ಯ ಏಳನೇ ಮತ್ತು ಕೊನೆಯ ಜಲಾಂತರ್ಗಾಮಿ ಹಡಗು ಇದಾಗಿದೆ. ನಾಲ್ಕು ಯುದ್ಧನೌಕೆಗಳನ್ನು ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ನಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಉಳಿದವುಗಳನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ (GRSE) ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಸುಧಾರಿತ ಸ್ಟೆಲ್ತ್ ವೈಶಿಷ್ಟ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಂವೇದಕಗಳು […]