Karnataka Assembly Election: ನಾನು ಜಾತಿಗಾಗಿ ಪ್ರಚಾರಕ್ಕೆ ಬಂದಿಲ್ಲ; ಸುದೀಪ್
ನಾನು ಜಾತಿ(Caste)ಯ ಪರವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೇನೆ ಅಂದುಕೊಳ್ಳಬೇಡಿ ಎಂದು ನಟ, ಕಿಚ್ಚ ಸುದೀಪ್ (Sudeep) ಮನವಿ ಮಾಡಿದ್ದಾರೆ. ಯಮಕನಮರಡಿ (Yamakanamaradi) ವಿಧಾನಸಭಾ ಕ್ಷೇತ್ರದ ವಂಟಮೂರಿ ಗ್ರಾಮದಲ್ಲಿ ರೋಡ್ ಶೋ ನಂತರ ಮಾತನಾಡಿದ ಅವರು, ನಮ್ಮದು ಯಾವ ಜನಾಂಗ. ನಾನು ಎಲ್ಲಿ ಹುಟ್ಟಿದೆ ಎನ್ನುವುದು ಮುಖ್ಯವಲ್ಲ. ಮನುಷ್ಯನಾಗಿರುವುದು, ಸ್ನೇಹಿತನಾಗಿರುವುದು ಮುಖ್ಯ. ಆಗ ಮಾತ್ರ ನಾವು ಎಲ್ಲ ಮನಸ್ಸುಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ನಾನು ನಿಮ್ಮ ಸಹೋದರ, ಸ್ನೇಹಿತನಾಗಿ ಬಂದಿದ್ದೇನೆ. ನನ್ನ ಬಾಂಧವರ ಪರ ತುಂಬಾ ಪ್ರೀತಿ ಇದೆ’ […]