ಇತ್ತೀಚೆಗಷ್ಟೇ ಮತದಾರರು ಮತ ಚಲಾಯಿಸಿದರೆ, ತಿಂಡಿ ಉಚಿತ ಹಾಗೂ ಮೊದಲ ಬಾರಿಗೆ ಮತ ಹಾಕುತ್ತಿರುವವರು ತಮ್ಮ ಹಕ್ಕು ಚಲಾಯಿಸಿದರೆ ಉಚಿತ ಸಿನಿಮಾ ಟಿಕೆಟ್ ನೀಡಲಾಗುವುದು ಎಂದು ವಿಧ ವಿಧದ ಆಫರ್ ಗಳನ್ನು ಹೋಟೆಲ್ ಮಾಲೀಕರು ನೀಡಿದ್ದರು. ಸದ್ಯ ಈ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ.
ಉಚಿತ ಆಹಾರ ನೀಡುತ್ತೇನೆ ಎಂದು ಘೋಷಿಸಿರುವ ಹೋಟೆಲ್ಗಳ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಇದು ಪ್ರಚೋದನೆಗಳು ಮತ್ತು ಚುನಾವಣೆ ನೀತಿ ಉಲ್ಲಂಘನೆ ಯಾಗುತ್ತದೆ ಎಂದು ಬಿಬಿಎಂಪಿ ಅಭಿಪ್ರಾಯಪಟ್ಟಿದೆ. ಉಚಿತ ಆಹಾರ ನೀಡುತ್ತಿರುವ ಹೊಟೇಲ್ ಆಡಳಿತ ಮಂಡಳಿಗಳ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ನಾಗರಿಕ ಮಂಡಳಿ ಎಚ್ಚರಿಕೆ ನೀಡಿದೆ.
ಮತ ಚಲಾಯಿಸುವಂತೆ ಉತ್ತೇಜಿಸಲು ಬೆಂಗಳೂರಿನ ಎರಡು ಹೋಟೆಲ್ಗಳು ಉಚಿತ ಆಹಾರ ಘೋಷಣೆಗಳನ್ನು ಮಾಡಿದ್ದವು. ನಿಸರ್ಗ ಗ್ರ್ಯಾಂಡ್ ಹೋಟೆಲ್ ಬೆಣ್ಣೆ ಖಾಲಿ ದೋಸೆ, ಮೈಸೂರು ಪಾಕ್ ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿತ್ತು. ಚಾಲುಕ್ಯ ಸಾಮ್ರಾಟ್ ಹೋಟೆಲ್ ಮತದಾನದ ನಂತರ ರೆಸ್ಟೋರೆಂಟ್ಗೆ ಭೇಟಿ ನೀಡಿದರೆ, ಉಚಿತ ಉಪಹಾರ ನೀಡುವುದಾಗಿ ಹೇಳಿತ್ತು. ಸದ್ಯ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಹೋಟೆಲ್ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹೇಳಿದೆ.