Kornersite

Bengaluru Just In Karnataka State

Karnataka Assembly Election:ನಿಪ್ಪಾಣಿ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಮತ್ತೊಮ್ಮೆ ಬಾವುಟ ಹಾರಿಸುವುದೇ?

ಗಡಿ ಕ್ಷೇತ್ರವಾಗಿರುವ ನಿಪ್ಪಾಣಿ (Nippani) ವಿಧಾನಸಭಾ ಕ್ಷೇತ್ರದಲ್ಲಿ ಮರಾಠಾ ಸಮುದಾಯದ ಪ್ರಾಭಲ್ಯ ಹೆಚ್ಚಾಗಿದೆ. ಈ ಕ್ಷೇತ್ರದಲ್ಲಿ ಮರಾಠಾ ಸಮುದಾಯ ಹಾಗೂ ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದು, ಬಜೆಪಿ ಹಾಗೂ ಕಾಂಗ್ರೆಸ್, ಎನ್ ಸಿಪಿ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಸಚಿವೆ ಶಶಿಕಲಾ ಜೊಲ್ಲೆ (Shashikala Annasaheb Jolle) ಬಿಜೆಪಿ (BJP) ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ (Congress) ಪಕ್ಷದಿಂದ ಕಾಕಾಸಾಹೇಬ್ ಪಾಟೀಲ್ (Kakasaheb Patil) ಕಣಕ್ಕೆ ಇಳಿದಿದ್ದಾರೆ. ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಆಪ್ತ ಉತ್ತಮ್ ಪಾಟೀಲ್ (Uttam Patil) ಮಹಾರಾಷ್ಟ್ರದ […]

Bengaluru Just In Karnataka Politics State

Karnataka Assembly Election: ಮಾಜಿ ಸಿಎಂ ಕುಮಾರಸ್ವಾಮಿಗೆ ಅನಾರೋಗ್ಯ!?

Bangalore : ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ. ನಿರಂತರ ಪ್ರಚಾರದಿಂದ ಬಳಲಿರುವ ಅವರು ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅನಾರೋಗ್ಯದ ಹಿನ್ನೆಲೆ ಜೆ.ಪಿ.ನಗರದ ನಿವಾಸದಲ್ಲಿಯೇ ಕುಮಾರಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ‌ ಕುಮಾರಸ್ವಾಮಿ ಅವರ ಎಲ್ಲ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಯಾರನ್ನೂ ಕೂಡ ಭೇಟಿ ಮಾಡಲು ಕುಮಾರಸ್ವಾಮಿ ನಿರಾಕರಿಸಿದ್ದು, ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರವಾಗಿ ಇಂದು […]

Bengaluru Just In Karnataka Politics State

Karnataka Assembly Election: ಪ್ರತಿಯೊಂದು ಕ್ಷೇತ್ರದ ಮೇಲೆಯೂ ಕಣ್ಣಿಟ್ಟಿರುವ ಬಿಜೆಪಿ; ಪ್ರತಿ ಕ್ಷೇತ್ರಕ್ಕೆ ಮೂವರು ಉಸ್ತುವಾರಿ!

Bangalore : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ(Karnataka assembly Election)ಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ಪಕ್ಷಗಳು ಗೆಲುವಿನ ಮಂತ್ರ ಪಠಿಸುತ್ತಿವೆ. ಹೀಗಾಗಿ ಸದ್ಯ ಬಿಜೆಪಿ ಸ್ಥಳೀಯ ಉಸ್ತುವಾರಿ, ಹೊರರಾಜ್ಯದಿಂದ ಬಂದಿರುವ ಉಸ್ತುವಾರಿ ಮತ್ತು ವಿಸ್ತಾರಕ ಎಂದು ಪ್ರತಿ ಕ್ಷೇತ್ರಕ್ಕೆ ಮೂರು ರೀತಿಯ ಉಸ್ತುವಾರಿಗಳ ನೇಮಕ ಮಾಡಿದೆ. ಪ್ರತಿ ಕ್ಷೇತ್ರಕ್ಕೆ ಕೂಡ ಹೊರ ರಾಜ್ಯದ ತಲಾ ಒಬ್ಬೊಬ್ಬ ಶಾಸಕ, ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಿಗೆ ರಾಜ್ಯದ ಚುನಾವಣಾ ಜವಾಬ್ದಾರಿ ನೀಡಿದೆ. ಹೊರ ರಾಜ್ಯದ ಉಸ್ತುವಾರಿಗಳ ಜೊತೆ ಸುದೀರ್ಘ […]

Bengaluru Just In Karnataka Politics State

Karnataka Assembly Election: ಸವದಿ ಬಿಜೆಪಿಯ ದುಡ್ಡು ಹಂಚುತ್ತಿದ್ದಾರೆ; ಅವರಿಂದ ಹಣ ಪಡೆದು ನಮಗೆ ಮತ ಹಾಕಿ!

ಚಿಕ್ಕೋಡಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಯ ಹಣ ಖರ್ಚು ಮಾಡುತ್ತಿದ್ದು, ಅವರಿಂದ ದುಡ್ಡು ಪಡೆದು ಬಿಜೆಪಿಗೆ (BJP) ಮತ ಚಲಾಯಿಸಿ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಸವದಿ (Laxman Savadi) ಕಣ್ಣೀರು ಹಾಕಿ ನಾಟಕ ಮಾಡುತ್ತಿದ್ದಾರೆ. ಪಕ್ಷದಿಂದ ಅವರಿಗೆ ಎಲ್ಲವನ್ನುನ್ನೂ ನೀಡಲಾಗಿತ್ತು. ಅವರು ಅಧಿಕಾರ ನೀಡಿದ ಎಲ್ಲರಿಗೂ ಮೋಸ ಮಾಡಿದ್ದಾರೆ. ಬಿ.ಎಲ್ ಸಂತೋಷ್‌ (BL Santhosh), ಉಮೇಶ್ ಕತ್ತಿಗೂ (Umesh Katti) ಸವದಿ […]

Bengaluru Just In Karnataka Politics State

Karnataka Assembly Election: ನಾಮಪತ್ರದಲ್ಲಿ ದೋಷ; ತಿರಸ್ಕಾರವಾಗುವ ಭಯದಲ್ಲಿ ಬಿಜೆಪಿ ಅಭ್ಯರ್ಥಿ!

Belagavi : ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸವದತ್ತಿ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ (Ratna Mamani) ಅವರು ತೊಂದರೆ ಮಾಡಿಕೊಂಡಿದ್ದು, ಈಗ ತಿರಸ್ಕೃತವಾಗುವ ಭೀತಿಯಲ್ಲಿದ್ದಾರೆ. ಚೆಂಡು ಈಗ ಸವದತ್ತಿ ಆರ್‌ಓ ಅಂಗಳದಲ್ಲಿದೆ. ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿರುವ ಸವದತ್ತಿ ಯಲ್ಲಮ್ಮ ಮತಕ್ಷೇತ್ರಕ್ಕೆ ಆಯ್ಕೆ ಬಯಸಿ ಬಿಜೆಪಿಯ ರತ್ನಾಮಾಮನಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ನಾಮಪತ್ರದಲ್ಲಿ ಲೋಪದೋಷಗಳಿವೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ (Congress) ಅಭ್ಯರ್ಥಿ ವಿಶ್ವಾಸ ವೈದ್ಯ ಹಾಗೂ ಆಪ್ ಪಕ್ಷದ (AAP) ಅಭ್ಯರ್ಥಿ ಬಾಪುಗೌಡ ಚುನಾವಣಾ […]

Bengaluru Just In Karnataka Politics State

Karnataka Assembly Election: ಬಿಜೆಪಿ ನಾಯಕರಿಗೆ ಲಿಂಗಾಯತ ಸೂತ್ರ ನೀಡಿದ ಅಮಿತ್ ಶಾ!

Bangalore : ಚುನಾವಣಾ ಕಣ ರಂಗೇರಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಮತದಾರರಿರುವ ಲಿಂಗಾಯತರನ್ನು ಸೆಳೆಯುವುದಕ್ಕಾಗಿ ತಂತ್ರ- ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಲಿಂಗಾಯತ ಸಿಎಂ (Lingayat CM) ಅಸ್ತ್ರ ಬಳಸಲು ಬಿಜೆಪಿ ಮುಂದಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಮತ್ತು ಬಿಜೆಪಿ ವಿರುದ್ಧ ನೇರಾನೇರ ಸಮರ ಆರಂಭವಾಗಿದೆ. ಬಿಜೆಪಿಗೆ (BJP) ಟೆನ್ಷನ್ ಹೆಚ್ಚಾಗಿದ್ದು, ಲಿಂಗಾಯತರ ಕಡೆಗಣನೆ ಆರೋಪದಿಂದ ಚುನಾವಣೆ ಹೊಡೆತದ ಆತಂಕ ಎದುರಾಗಿದೆ. ಈ ಲಿಂಗಾಯತ ಸಿಎಂ ಟೆನ್ಷನ್ ವಿಚಾರಕ್ಕೆ ಅಮಿತ್ ಶಾ (Amit Shah) ತಮ್ಮದೇ […]

Bengaluru Just In Karnataka Politics State

Karnataka Assembly Election: ಡಿಕೆಶಿಗೆ ಬಿಗ್ ರಿಲೀಫ್! ನಾಮಪತ್ರ ಸ್ವೀಕೃತ!

Ramanagar : ಡಿಕೆ ಶಿವಕುಮಾರ್ (DK Shivakumar) ಅವರ ನಾಮಪತ್ರ ಸ್ವೀಕೃತವಾಗಿದ್ದು, ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನಿಂದ (Congress) ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಆದರೆ, ಆದಾಯ ತೆರಿಗೆ ಅಧಿಕಾರಿಗಳು ನೀಡಿದ ನೊಟೀಸ್ ಹಿನ್ನೆಲೆಯಲ್ಲಿ ಅವರ ನಾಮಪತ್ರ ತಿರಸ್ಕೃತವಾಗುತ್ತದೆ ಎಂಬ ಆತಂಕ ಶುರುವಾಗಿತ್ತು. ಹೀಗಾಗಿ ಅವರ ಸಹೋದ ಡಿಕೆ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಸದ್ಯ ಡಿಕೆಶಿ ನಾಮಪತ್ರ ಸ್ವೀಕೃತವಾಗಿದ್ದು, ದೊಡ್ಡ ತಲೆನೋವು ಕಳೆದಂತಾಗಿದೆ. ಕೆಪಿಸಿಸಿ ಅಧ್ಯಕ್ಷರ ನಾಮಪತ್ರವನ್ನು ಚುನಾವಣಾಧಿಕಾರಿ […]

Bengaluru Just In Karnataka Politics State

Karnataka Assembly Election: ರಮೇಶ ಜಾರಕಿಹೊಳಿ ಆಸ್ತಿಯಲ್ಲಿ ಗಣನೀಯ ಇಳಿಕೆ!

ಗೋಕಾಕ್‌ (Gokak) ಕ್ಷೇತ್ರದ ಅಭ್ಯರ್ಥಿ ರಮೇಶ್‌ ಜಾರಕಿಹೊಳಿ (Ramesh Jarkiholi) ಅವರು ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದು, ತಮ್ಮ ಆಸ್ತಿ ಘೋಷಿಸಿಕೊಂಡಿದ್ದಾರೆ. ಈ ಬಾರಿ ಅವರ ಆಸ್ತಿ 49.25 ಕೋಟಿ ರೂ. ಇದೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ರಮೇಶ್, 2018ರ‌ ವಿಧಾನಸಭೆ ‌ಚುನಾವಣೆಯಲ್ಲಿ 122 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. 2013 ರ ಚುನಾವಣೆಯಲ್ಲಿ ‌57 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. ಆದರೆ 2023ರ ಚುನಾವಣೆಯಲ್ಲಿ ಘೋಷಿಸಿದ ಆಸ್ತಿಯಲ್ಲಿ ಗಣನೀಯ ಕುಸಿತ ಕಂಡಿದೆ. ಪುತ್ರ ಸಂತೋಷ ‌ಜಾರಕಿಹೊಳಿ ಪ್ರತ್ಯೇಕವಾಗಿ […]

Bengaluru Just In Karnataka Politics State

Karnataka Assembly Election: ಕಾಂಗ್ರೆಸ್ ಅಭ್ಯರ್ಥಿಗೆ ಬಿ ಫಾರಂ ನೀಡಿದ ಬಿಜೆಪಿ!? ಯಾವುದಕ್ಕಾಗಿ ಈ ತಂತ್ರ?

Hassan : ಅರಕಲಗೂಡು (Arakalagudu) ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಬೆಳವಣಿಗೆಯೊಂದು ನಡೆದಿದ್ದು, ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ (BJP) ಹೈಕಮಾಂಡ್ ಬಿ ಮತ್ತು ಸಿ ಫಾರಂಗಳನ್ನು ನೀಡಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ (Congress) ಪಕ್ಷದ ಟಿಕೆಟ್ ವಂಚಿತ ಎಂ.ಟಿ.ಕೃಷ್ಣೇಗೌಡ ಅವರಿಗೆ (MT Krishnegowda) ಬಿ ಮತ್ತು ಸಿ ಫಾರಂ ನೀಡಲಾಗಿದೆ. ಈಗಾಗಲೇ ಬಿಜೆಪಿಯಿಂದ ಎಚ್.ಯೋಗಾರಮೇಶ್ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಅವರು ಉಮೇದುವಾರಿಕೆ ಸಲ್ಲಿಸಿದ್ದದ್ದರು. ಆದರೆ, ಎಂ.ಟಿ.ಕೃಷ್ಣೇಗೌಡಗೆ ಬಿಜೆಪಿ ಬಿ, ಸಿ ಫಾರಂ ನೀಡಿದ್ದು […]

Bengaluru Just In Karnataka Politics State

Karnataka Assembly Election: ದಾಖಲೆ ಇಲ್ಲದೆ ಸಾಗುತ್ತಿದ್ದ 200 ಕೋಟಿ ರೂ.ಗೂ ಅಧಿಕ ಮೊತ್ತದ ವಸ್ತುಗಳು ವಶಕ್ಕೆ!

 ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮದ್ಯೆ ಚುನಾವಣಾ ಅಕ್ರಮ ಕೂಡ ಬಿರುಸಿನಿಂದಲೇ ನಡೆಯುತ್ತಿದೆ. ಮತದಾರನ್ನು ಸೆಳೆಯುವುದಕ್ಕಾಗಿ ಹಣ, ಹೆಂಡ ಸೇರಿದಂತೆ ಹಲವು ವಸ್ತುಗಳನ್ನು ಹಂಚಲಾಗುತ್ತಿದೆ. ಸದ್ಯ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದು ವಶಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 200 ಕೋಟಿ ರೂ. ಗೂ ಮೀರಿದ  ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ  ರಾಜ್ಯಾದ್ಯಂತ 76.70 ಕೋಟಿ ರೂ. ನಗದು  ವಶಪಡಿಸಿಕೊಳ್ಳಲಾಗಿದೆ. ದಿನವೊಂದಕ್ಕೆ ಸುಮಾರು ಒಂದೂವರೆ ಕೋಟಿಗೂ ಅಧಿಕ ನಗದು ಸೀಜ್ ಮಾಡಲಾಗುತ್ತಿದೆ. ಪೊಲೀಸ್, ಎಫ್ […]